ಗುರುವಾರ, ಜುಲೈ 28, 2011

ಅಮರವಾಗಿರಲಿ ನಿನ್ನ ಪ್ರೀತಿ.

ಗೆಳೆಯಾ ಬಾಡದಿರಲಿ
ನಿನ್ನ ಅರಳಿದ ಹೃದಯ..!!
ಮಾಗದಿರಲಿ
ನಿನ್ನ ಮನಸು..!!
ಅಮರವಾಗಿರಲಿ
ನಿನ್ನ ಪ್ರೀತಿ...!!
ನಾನೀರುವೆ
ನಿನ್ನ ಹೃದಯಕ್ಕೆ ಕಣ್ಣಾಗಿ...!!
ನಾ ಜೊತೆಗಾತಿಯಾಗುವೆ
ನಿನ್ನ ತುಂಬು ಭಾವನೆಗಳ ಮನಸ್ಸಿಗೆ..!!
ಸಿಹಿ ಉಣಿಸುವೆ
ನಿನ್ನ ಅಮರ ಪ್ರೀತಿಗೆ..!!
ನೀ ಬಯಸು
ನನ್ನೊಡಲಿನ ಒಲವ..!!

ಮಂಗಳವಾರ, ಜುಲೈ 26, 2011

ಗೆಳೆಯಾ ನಾನಿರಲೇ....!!

ಗೆಳೆಯ
ನಾನಿರುವೆ ನಿನ್ನೊಳಗೆ
ಕಾಣದ ಪ್ರೀತಿಯಾಗಿ..!!
ನಿನ್ನ ಮನದೋಳಗೆ ಬಣ್ಣಿಸಲಾರೆ
ನಿನ್ನ ಪ್ರೀತಿಯ ಅನುಭವವ..!!
ಇನ್ನು ಅನುಭವಿಸಲು
ಹ೦ಬಲಿಸುತಿರುವೆ
ನಾ  ಯಾವಗಲೂ..!!
ಮರಣಕ್ಕೂ ಮುನ್ನ ಮರಣದ ನ೦ತರವು.
ಆ ನಿನ್ನ
ನಿಷ್ಕಲ್ಮಷ ಪ್ರೀತಿಯ
ಉಣ ಬಡಿಸುವೆಯಾ ....!!?