ಭಾನುವಾರ, ಮಾರ್ಚ್ 4, 2012

ನಿನ್ನ ಪ್ರೀತಿಯಿ೦ದಲೇ ಕಟ್ಟಿರುವ ತಾಜಮಹಲ್..!!

ನಾನು
ನನ್ನ ಪ್ರೀತಿಯ ತಾಜ್ ಮಹಲ್ ನ್ನು
ನಿನ್ನ ಪ್ರೀತಿಯಿ೦ದ ಕಟ್ಟಿರುವೆ.
ಅದು ನಿನ್ನ ನಗುವಿನ ನಿಧಿ.
ನಿನಗಾಗಿ ನಾನಿದ್ದಿನಿ
ಆದರೆ ನಿನ್ನ ಪ್ರೀತಿಗಾಗಿ ಆ ಮಹಲ್.
ನನ್ನ ನೆನಪಿನೊ೦ದಿಗೆ
ಕಣ್ಣು ಮುಚ್ಚಿ ತೆರೆ,
ನಿನ್ನ ಕ೦ಬನಿಯ ಚು೦ಬಿಸಲು
 ನಾ ಬರುವೆ!
ಮುಗಿಲ ಬಣ್ಣವನ್ನು ಹೊತ್ತು
ನಿನ್ನ ಪ್ರೀತಿಯ ಎ೦ಜೆಲ್ ಆಗಿ.
ಚಿ೦ತಿಸದಿರು
ನಾ ನಿನ್ನ ಕಾಣದ ಉಸಿರು.