ಶನಿವಾರ, ಅಕ್ಟೋಬರ್ 29, 2011

ನಿನ್ನ ಹೊರತು ಬೇರೆನು ಬೇಡ ಪ್ರೀಯ..!!

ನಿನ್ನೆ ಸಿಕ್ಕ
ನಿನ್ನ  ನೆನಪುಗಳು
ಕೇವಲ ನೆಪವಾಗದೆ
ಬೇನ್ನ ಹಿಂದಿನ
ಹಿಂಬರಹವಾಗಿ ಮೂಡಿವೆ..!!
ಅದನ್ನು ನೋಡಲೂ ಆಗುತ್ತಿಲ್ಲ
ಓದಲು ಆಗುತ್ತಿಲ್ಲ..!!
ಆ..!! ಸಾಲುಗಳು
ನಿನ್ನ ಹೊರತು
ಬೇರೆ ಯಾರಿಗೂ ಗೋಚರಿಸುವದಿಲ್ಲ..!!
ಮನಸು ಒಪ್ಪದ ಪ್ರೀತಿ..!?
ಎಂದರೆ ಇದೇನಾ..!!??

ಮಂಗಳವಾರ, ಅಕ್ಟೋಬರ್ 25, 2011

ಗೂಡುಹೃದಯಕ್ಕೆ ಹತ್ತಿರವಾದೆ
ಅದಕ್ಕೆ ನಾ ನಿನ್ನ
ಜೀವದ ಗೇಳೆಯ ಎಂದೆ..!!
ನೀ ಕೇಳದಿದ್ದರೂ
ನನ್ನ ಮನಸಲ್ಲಿ
ಗೂಡು ಮಾಡಿಕೊಟ್ಟೆ..!!
ಇಂದು
ಉಸಿರು ಕಟ್ಟಿದೆ
ಆದರೂ ನಿನ್ನ ಸುಳಿವಿಲ್ಲ..!!
ಮನಸ್ಸೆಂಬ ಮರಕ್ಕೆ
ಗೂಡೆಂಬ ಖಾಲಿ ಜೋಕಾಲಿ
ಇಣುಕಿ ನೋಡಿದರೆ
ಬರಿ ನೆನಪಿನ ಧೂಳು..!!

ಮಂಗಳವಾರ, ಆಗಸ್ಟ್ 23, 2011

ಇನಿಯಾ ಕಷ್ಟವಾಗಿದೆ ಇಚ್ಛೆ ಇಲ್ಲದ ಮಂದಹಾಸ

ನಿನಗಾಗಿ ಕಣ್ಣಿನ
ಒಂದೆರದು ಹನಿಗಳಿಗೆ
ಅವಕಾಶ ನೀಡಲೇ..!!?
ಅಥವಾ
ಕಣ್ಮುಚ್ಚಿ
ನಿನ್ನ ನೆನಪಲ್ಲಿ
ನಿಟ್ಟುಸಿರು ಬೀಡಲೇ..!!?
ಇನಿಯಾ ಕಷ್ಟವಾಗಿದೆ
ಇಚ್ಛೆ ಇಲ್ಲದ ಮಂದಹಾಸ
ಮುಖದಲ್ಲಿ ಮಿಸುಕಾಡುತ್ತಿದೆ
ಇವು
ನಾಳೆ ನೀ ಬರುವ
ಇಂದಿನ ಬರವಸೇಗಳೇ..!!?
ಹಾಗದರೆ ನಾಳೆಯದ್ದು..?
ನನ್ನ ಉಸಿರಿರುವದಾದರೆ
ನಾಳೆಯ ನಂಬಿಕೆಯಲ್ಲಿ..!!
ಮೇಣದ ಬತ್ತಿ ಹಚ್ಚಿ
ಕಾಯುವೇ..!!!

ಭಾನುವಾರ, ಜುಲೈ 31, 2011

ಖಾಲಿ ಮನಸ್ಸಿನ ಭಾವನೆಗಳ ಜೊತೆ ಒಂದು ಸಂಜೆ...!!

ಆ..ಸೂರ್ಯನ
ಬಿಳ್ಕೊಡಲೆಂದು
ತೀರದತ್ತ ನಾ ಬಂದಾಗ,
ಕಂಡೆ ನಾ
ಆ..ಅಲೆಗಳು
ಚುಂಬಿಸುತ್ತಿದ್ದ ಮಂಟಪವ,
ಅದು
ಎತ್ತ ನೋಡಿದರೂ
ಬರಿದು ಬರಿದಾದ ,
 ಉಳಿಯ
ಎಟಿಗೆ
ಅವಕಾಶ ನೀಡಲೊಲ್ಲದ ,
ಖಾಲಿ
ಮನಸ್ಸಿನ
 ಭಾವನೆಗಳನ್ನು ಹೋತ್ತ,
ನೋವು
ನಲಿವು
ನೆನಪುಗಳು ತುಂಬಿದ ,
ನನ್ನವನ
ಕಾಯದ ಪ್ರೀತಿಯ
ಮರಳಿನ ಮಂಟಪ,
ಅಡಿಪಾಯವಿಲ್ಲದ
ಮಂಟಪ
ಆಸೆಗೆ ಬಹು ದೂರ...!!

ಗುರುವಾರ, ಜುಲೈ 28, 2011

ಅಮರವಾಗಿರಲಿ ನಿನ್ನ ಪ್ರೀತಿ.

ಗೆಳೆಯಾ ಬಾಡದಿರಲಿ
ನಿನ್ನ ಅರಳಿದ ಹೃದಯ..!!
ಮಾಗದಿರಲಿ
ನಿನ್ನ ಮನಸು..!!
ಅಮರವಾಗಿರಲಿ
ನಿನ್ನ ಪ್ರೀತಿ...!!
ನಾನೀರುವೆ
ನಿನ್ನ ಹೃದಯಕ್ಕೆ ಕಣ್ಣಾಗಿ...!!
ನಾ ಜೊತೆಗಾತಿಯಾಗುವೆ
ನಿನ್ನ ತುಂಬು ಭಾವನೆಗಳ ಮನಸ್ಸಿಗೆ..!!
ಸಿಹಿ ಉಣಿಸುವೆ
ನಿನ್ನ ಅಮರ ಪ್ರೀತಿಗೆ..!!
ನೀ ಬಯಸು
ನನ್ನೊಡಲಿನ ಒಲವ..!!

ಮಂಗಳವಾರ, ಜುಲೈ 26, 2011

ಗೆಳೆಯಾ ನಾನಿರಲೇ....!!

ಗೆಳೆಯ
ನಾನಿರುವೆ ನಿನ್ನೊಳಗೆ
ಕಾಣದ ಪ್ರೀತಿಯಾಗಿ..!!
ನಿನ್ನ ಮನದೋಳಗೆ ಬಣ್ಣಿಸಲಾರೆ
ನಿನ್ನ ಪ್ರೀತಿಯ ಅನುಭವವ..!!
ಇನ್ನು ಅನುಭವಿಸಲು
ಹ೦ಬಲಿಸುತಿರುವೆ
ನಾ  ಯಾವಗಲೂ..!!
ಮರಣಕ್ಕೂ ಮುನ್ನ ಮರಣದ ನ೦ತರವು.
ಆ ನಿನ್ನ
ನಿಷ್ಕಲ್ಮಷ ಪ್ರೀತಿಯ
ಉಣ ಬಡಿಸುವೆಯಾ ....!!?

ಶುಕ್ರವಾರ, ಜುಲೈ 22, 2011

ನನ್ನ ಮುದ್ದು ಜೀವ ನೀನು..!!

ಜೀವಕ್ಕೆ ಜೀವ ನೀನು
ಎಂದು ನಂಬಿರುವ ನನಗೆ
ಹಾಸ್ಯ ಮಾಡುತ್ತಿರುವೆಯಾ
ನಿನ್ನ ಮರೆತು ಬಿಡುವೆನೆಂದು...!!?
ಬರಿ ಹಿಡಿಯಷ್ಟು
ಪ್ರೀತಿಯಲ್ಲ ಗೆಳೆಯಾ..
ಬೊಗಸೆಗೆ ಮೀರಿದ್ದು...!!!

ನೋಡಿದೆಯಾ ನನ್ನ ಕಂಬನಿಯನ್ನ
ಅವು ಸಹ
ನಿನ್ನ ಎಷ್ಟೋಂದು ಪ್ರೀತಿಸುತ್ತವೆ
ಎಂದು..!!
ನಿನಗಾಗಿ
ಕಣ್ಣು ತುಂಬಿ ಬರುತ್ತವೆ..!!
ಆದರೆ ಅವುಗಳ ಪ್ರೀತಿ
ನಿನಗೆ ಅನುಭವಿಸಲಾಗದು..!!
ಅಂತೆಯೇ
ಅರಿತುಕೊಳ್ಳಲು ಆಗದು..!!
ಯಾಕೆಂದರೆ
ಅವು ನನ್ನ ದುಃಖಕ್ಕೆ ಮಾತ್ರ ಸೀಮಿತ..!!

ಶುಕ್ರವಾರ, ಜುಲೈ 8, 2011

ಕಣ್ಣು ಮುಚ್ಚಿದರೆ ಸಾಕು...!

ನಾ
ಮರೆವೆನೆಂದರೆ ನಿನ್ನ
ಕ್ಷಣ ಕ್ಷಣಕ್ಕೂ ಕಾಡುತ್ತಿ
ಕಣೋ ನೀ ನನ್ನ ,
ಅರೇ ಕ್ಷಣ
ಜಗವ ಮರೆತು
ಕಣ್ಣು ಮುಚ್ಚಿದರೆ ಸಾಕು,
ನನ್ನ
ನಿನ್ನ ಮಡಿಲಲ್ಲಿ ಮಲಗಿಸಿಕೊಂಡು
ಚುಂಬಿಸಿದಂತೆ ಭಾಸವಾಗುತ್ತೆ,
ನಿನ್ನನ್ನ
ಕಣ್ಣ ತುಂಬ
ತುಂಬಿಕೊಂಡ ನನಗೆ
ಅವಕಾಶ ನೀಡಲಾಗುತ್ತಿಲ್ಲ
ಆ ಕಂಬನಿಗಳಿಗೆ,
ಎನು ಮಾಡಲಿ
ಆ ನಿನ್ನ ನೆನಪುಗಳನ್ನ ಚಿನ್ನ
ಅವು ನಿನಗಿಂತ ಚೆನ್ನ..!!

ಸೋಮವಾರ, ಜುಲೈ 4, 2011

ನನ್ನ ನೆನಪು ಕಾಡದಿರುವಷ್ಟು...!!

ಇನಿಯ
ನನ್ನ ನೆನಪು
ಬಾರದೆ ನಿನಗೆ,..!?
ನನ್ನ ನೆನಪು  ಕಾಡದಿರುವಷ್ಟು 
ನಾ ಭಾರವೇ ನಿನಗೆ...!?
ಬಿಟ್ಟು ಹೋಗದಿರು
ಸ್ನೇಹದ ಗೂಡ ಮರೆಯದಿರು
ನನ್ನ ಅನಿರೀಕ್ಷಿತ ಪ್ರೀತಿಯ
ತೊರೆದು ಹೋಗದಿರು
ನನ್ನ ಮರಣಕ್ಕೆ ಮುನ್ನ
ಮರಣದ ನಂತರವೂ.
ನಿನಗಾಗಿ ನಾ ಕಾಯಲೇ..!?  

ಶನಿವಾರ, ಜುಲೈ 2, 2011

ಈ ಒಲವಿನ ಬದುಕು ನಿನ್ನ ಪಾಲಿಗೂ ಇದೆ.

ಬಣ್ಣವಿಲ್ಲದ
ಕನಸು
ಕಾಣಬೇಡ,
ಪ್ರೀತಿ
ಇಲ್ಲದ ಸ್ನೇಹ
ಮಾಡಬೇಡ,
ಕಪ್ಪು ಬಿಳುಪಿನ
ಕನಸಿಗೆ ಬಣ್ಣ ಕಟ್ಟಿ
ಪ್ರೀತಿ
ತುಂಬಿದ ಸ್ನೇಹವನ್ನು
ಸ್ವಾಗತಿಸು,
ಈ ವರ್ಣಮಯ ಜೀವನ
ನಿನ್ನ ಕಲ್ಪನೆಗೆ ಮೀರಿದ್ದು
ಅವಕಾಶ ಸಿಕ್ಕರೆ
ಅನುಭವಿಸಲು ಪ್ರಯತ್ನಿಸು,
ಈ ಒಲವಿನ ಬಣ್ಣದ
ಬದುಕು
ನಿನ್ನ ಪಾಲಿಗೂ ಇದೆ..!!

ಗುರುವಾರ, ಜೂನ್ 30, 2011

ಜೊತೆಯಲ್ಲಿ ಜೊತೆ ಜೊತೆಯಲ್ಲಿ..!!

ಗೆಳೆಯಾ
ನಾ ನಡೆದಾಡುವಾಗ
ನಾ ಕಂಡೆ
ನಿನ್ನನ್ನು  ನನ್ನ ಜೋತೆಯಲ್ಲಿ..!!
ನಿನ್ನೋಂದಿಗೆ ಹೆಜ್ಜೆಯೊಂದಿಗೆ
ಹೆಜ್ಜೆ ಇಟ್ಟು
ನಡೆವಾಗ ಮನದಲ್ಲೇನೋ ಲಜ್ಜೆ
ಸಾಗುತ್ತಿದ್ದೆ ನಿನ್ನೋಂದಿಗೆ
ಹಿಂದುರಗಿ ನೋಡದೆ
ಕೈ ಹಿಡಿದಿರುವೆನೆಂದು,
ಚಂದಿರನ ನೋಡಿ
ನಿನ್ನ ಮುದ್ದು ಮುಖ
ನೆನಪಾಯಿತು.
ನಿನ್ನ ಕಾಣಲೆಂದು
ಕಾತುರದಿ ತಿರುಗಿ ನೋಡಿದೆ
ಆಗಲೆ ಅರಿವಾಗಿದ್ದು
ನಾನು ದಡ್ಡಿಯೆಂದು
ಯಾಕೆಂದರೆ
ನಾನು ಕ್ಷಣ ಕಾಲ
ಕಂಡಿದ್ದು ಕನಸು .!!
ಅದು ನನ್ನ ನೇರಳು ನೋಡಿ..!!


ಪ್ರೀತಿ ಇದು..!!

ಪ್ರೀತಿ
ಇದು ನಾಟಕವಲ್ಲ
ವಾಸ್ತವ ಬದುಕು..!!
ಎರಡು ನೀಮಿಷಕ್ಕೂ ಮೂರು  ಗಂಟೆಗೂ
ಬಣ್ಣ ಹಚ್ಚಿ
ನಟಿಸಲು ಹೋಗಬೇಡಿ,
ಪ್ರೀತಿಯ ಬದುಕು
ಬಣ್ಣ ಬಣ್ಣದ್ದೆ..!!
ಆದರೆ ಬಣ್ಣವಲ್ಲ
ಇಷ್ಟ ಬಂದ ಹಾಗೆ
ಬಳಿದು ಕೊಂಡು ನಟಿಸಲು,
ಯಾಕೆಂದರೆ
ಎರಡು ನೀಮಿಷಾನು ಜೀವನಾನೇ..!!
ಮೂರು ಗಂಟೆನೂ ಜೀವನಾನೇ.!!
ಬಣ್ಣದ ಬದುಕು
ಬಣ್ಣವಾಗಿ ಉಳಿಬಾರದು
ಹಗಲು ಕನಸಿನಂತೆ..!!

ಮಂಗಳವಾರ, ಜೂನ್ 28, 2011

ನಾ ನಿನ್ನೋಳಗಿನ ಬೆಚ್ಚನೆಯ ಉಸಿರಾಗುವೆ.!!

ಇನಿಯಾ
ನೀ ಅಪ್ಪಿಕೊಳ್ಳುವೆಯಾದರೆ
ನಾ ನಿನ್ನೋಳಗಿನ
ಬೆಚ್ಚನೆಯ ಉಸಿರಾಗುವೆ,
ನೀ ಸಿಹಿ ಮುತ್ತೋಂದು
 ಕೇಳುವೆಯಾದರೆ
ನನ್ನ ತುಟಿಗಳಿಂದ
ನಿನ್ನ ಕೆನ್ನೆಯ ರಂಗೇರಿಸುವೆ,
ನೀ ನನ್ನ ಕನಸಲಿ
ಕಾಣಲು ಇಚ್ಚಿಸುವೆಯಾದರೆ
ನಿನ್ನ ಕಣ್ಣೋಳಗೆ
ಚಿತ್ರವಾಗಿ ಬಿಂಬಿಸುವೆ ,
ನಾ ನಿನ್ನೋಂದಿಗಿಲ್ಲವೆಂದು
ಚಿಂತಿಸುವೆಯಾದರೆ  
ನಿನ್ನ ಮುಂದೆ
ಕಾಮನ ಬಿಲ್ಲಾಗಿ ಗೋಚರಿಸುವೆ.!!

ಸೋಮವಾರ, ಜೂನ್ 27, 2011

ಸೌಂದರ್ಯ..!!

 ಮನಸ್ಸು
ಸೂರೆಗೊಂಡ
ಈ ವರ್ಣಮಯ ಜಗತ್ತು
ನೋಡಲು ಎಷ್ಟು ಸುಂದರ..!!
ಆದರೆ ,
ಅದನ್ನೆಲ್ಲ ಅನುಭವಿಸಲು
ಮನುಷ್ಯನ ಬಾಳು
 ಬಲು ಚುಟುಕ....!!