ಶನಿವಾರ, ಜುಲೈ 2, 2011

ಈ ಒಲವಿನ ಬದುಕು ನಿನ್ನ ಪಾಲಿಗೂ ಇದೆ.

ಬಣ್ಣವಿಲ್ಲದ
ಕನಸು
ಕಾಣಬೇಡ,
ಪ್ರೀತಿ
ಇಲ್ಲದ ಸ್ನೇಹ
ಮಾಡಬೇಡ,
ಕಪ್ಪು ಬಿಳುಪಿನ
ಕನಸಿಗೆ ಬಣ್ಣ ಕಟ್ಟಿ
ಪ್ರೀತಿ
ತುಂಬಿದ ಸ್ನೇಹವನ್ನು
ಸ್ವಾಗತಿಸು,
ಈ ವರ್ಣಮಯ ಜೀವನ
ನಿನ್ನ ಕಲ್ಪನೆಗೆ ಮೀರಿದ್ದು
ಅವಕಾಶ ಸಿಕ್ಕರೆ
ಅನುಭವಿಸಲು ಪ್ರಯತ್ನಿಸು,
ಈ ಒಲವಿನ ಬಣ್ಣದ
ಬದುಕು
ನಿನ್ನ ಪಾಲಿಗೂ ಇದೆ..!!

ಗುರುವಾರ, ಜೂನ್ 30, 2011

ಜೊತೆಯಲ್ಲಿ ಜೊತೆ ಜೊತೆಯಲ್ಲಿ..!!

ಗೆಳೆಯಾ
ನಾ ನಡೆದಾಡುವಾಗ
ನಾ ಕಂಡೆ
ನಿನ್ನನ್ನು  ನನ್ನ ಜೋತೆಯಲ್ಲಿ..!!
ನಿನ್ನೋಂದಿಗೆ ಹೆಜ್ಜೆಯೊಂದಿಗೆ
ಹೆಜ್ಜೆ ಇಟ್ಟು
ನಡೆವಾಗ ಮನದಲ್ಲೇನೋ ಲಜ್ಜೆ
ಸಾಗುತ್ತಿದ್ದೆ ನಿನ್ನೋಂದಿಗೆ
ಹಿಂದುರಗಿ ನೋಡದೆ
ಕೈ ಹಿಡಿದಿರುವೆನೆಂದು,
ಚಂದಿರನ ನೋಡಿ
ನಿನ್ನ ಮುದ್ದು ಮುಖ
ನೆನಪಾಯಿತು.
ನಿನ್ನ ಕಾಣಲೆಂದು
ಕಾತುರದಿ ತಿರುಗಿ ನೋಡಿದೆ
ಆಗಲೆ ಅರಿವಾಗಿದ್ದು
ನಾನು ದಡ್ಡಿಯೆಂದು
ಯಾಕೆಂದರೆ
ನಾನು ಕ್ಷಣ ಕಾಲ
ಕಂಡಿದ್ದು ಕನಸು .!!
ಅದು ನನ್ನ ನೇರಳು ನೋಡಿ..!!


ಪ್ರೀತಿ ಇದು..!!

ಪ್ರೀತಿ
ಇದು ನಾಟಕವಲ್ಲ
ವಾಸ್ತವ ಬದುಕು..!!
ಎರಡು ನೀಮಿಷಕ್ಕೂ ಮೂರು  ಗಂಟೆಗೂ
ಬಣ್ಣ ಹಚ್ಚಿ
ನಟಿಸಲು ಹೋಗಬೇಡಿ,
ಪ್ರೀತಿಯ ಬದುಕು
ಬಣ್ಣ ಬಣ್ಣದ್ದೆ..!!
ಆದರೆ ಬಣ್ಣವಲ್ಲ
ಇಷ್ಟ ಬಂದ ಹಾಗೆ
ಬಳಿದು ಕೊಂಡು ನಟಿಸಲು,
ಯಾಕೆಂದರೆ
ಎರಡು ನೀಮಿಷಾನು ಜೀವನಾನೇ..!!
ಮೂರು ಗಂಟೆನೂ ಜೀವನಾನೇ.!!
ಬಣ್ಣದ ಬದುಕು
ಬಣ್ಣವಾಗಿ ಉಳಿಬಾರದು
ಹಗಲು ಕನಸಿನಂತೆ..!!

ಮಂಗಳವಾರ, ಜೂನ್ 28, 2011

ನಾ ನಿನ್ನೋಳಗಿನ ಬೆಚ್ಚನೆಯ ಉಸಿರಾಗುವೆ.!!

ಇನಿಯಾ
ನೀ ಅಪ್ಪಿಕೊಳ್ಳುವೆಯಾದರೆ
ನಾ ನಿನ್ನೋಳಗಿನ
ಬೆಚ್ಚನೆಯ ಉಸಿರಾಗುವೆ,
ನೀ ಸಿಹಿ ಮುತ್ತೋಂದು
 ಕೇಳುವೆಯಾದರೆ
ನನ್ನ ತುಟಿಗಳಿಂದ
ನಿನ್ನ ಕೆನ್ನೆಯ ರಂಗೇರಿಸುವೆ,
ನೀ ನನ್ನ ಕನಸಲಿ
ಕಾಣಲು ಇಚ್ಚಿಸುವೆಯಾದರೆ
ನಿನ್ನ ಕಣ್ಣೋಳಗೆ
ಚಿತ್ರವಾಗಿ ಬಿಂಬಿಸುವೆ ,
ನಾ ನಿನ್ನೋಂದಿಗಿಲ್ಲವೆಂದು
ಚಿಂತಿಸುವೆಯಾದರೆ  
ನಿನ್ನ ಮುಂದೆ
ಕಾಮನ ಬಿಲ್ಲಾಗಿ ಗೋಚರಿಸುವೆ.!!

ಸೋಮವಾರ, ಜೂನ್ 27, 2011

ಸೌಂದರ್ಯ..!!

 ಮನಸ್ಸು
ಸೂರೆಗೊಂಡ
ಈ ವರ್ಣಮಯ ಜಗತ್ತು
ನೋಡಲು ಎಷ್ಟು ಸುಂದರ..!!
ಆದರೆ ,
ಅದನ್ನೆಲ್ಲ ಅನುಭವಿಸಲು
ಮನುಷ್ಯನ ಬಾಳು
 ಬಲು ಚುಟುಕ....!!