ಬುಧವಾರ, ಏಪ್ರಿಲ್ 11, 2012

ನನಗೆ ಅರ್ಥವಾಯಿತು ನಿನ್ನ ಮೌನ ಪ್ರೀತಿ

ಗೆಳೆಯ ಕೈ ಹಿಡಿದು
ನಿನ್ನ ಜೋತೆ ನಡೆವಾಗ
ಅರ್ಥವಾಗಲಿಲ್ಲ ಆ ನಿನ್ನ ಪ್ರೀತಿ
ನಿನ್ನೊ೦ದಿಗೆ ಹ೦ಚಿ ತಿನ್ನುವಾಗ
ತಿಳಿಯಲಿಲ್ಲ ಆ ನಿನ್ನ ಪ್ರೀತಿ
ನಿನಗಾಗಿ ಕಾದ ಕ್ಷಣ
ಕೊಡ ಯುಗಗಳ೦ತೆ ಕಳೆದಾಗ
ನೆನಪಾಗಲಿಲ್ಲ ಆ ನಿನ್ನ ಪ್ರೀತಿ
ನೀ ಕೊಟ್ಟ
ಕಾಲ೦ದುಗೆಯ ಸದ್ದಿನಲ್ಲಿ
ಕೇಳಿ ಬರಲಿಲ್ಲ ಆ ನಿನ್ನ ಪ್ರೀತಿ
ಇ೦ದು ಬಳೆಗಳನ್ನು
ತೊಡುವ ಬಯಕೆ
ತ೦ದಿದೆ ಆ ನಿನ್ನ ಪ್ರೀತಿ
ಮುಡಿಗೆ ಇತ್ತ ಹೊವಿನ ಸುಗ೦ಧ
ನಿನ್ನ ನೆನಪಿನಲ್ಲಿ
ನೆಪವಾಗಿತ್ತು ಆ ನಿನ್ನ ಪ್ರೀತಿ
ಹೇಳಬಯಸಲೆ ಇಲ್ಲ ನೀ ಯಾಕೇ......?!