ಮಂಗಳವಾರ, ಏಪ್ರಿಲ್ 4, 2017

ನಿನಗಾಗಿ ಈ ನಿರೀಕ್ಷಣೆ ಗೆಳೆಯಾ..!!

ಇನಿಯಾ
ನನ್ನಷ್ಟೇ ನನ್ನ ಕಣ್ಣ ಕಂಬನಿ
ಕೂಡಾ ನಿನಗಾಗಿ ಕಾದಿದೆ
ಇದಕ್ಕೆ ಪ್ರತ್ಯೂತ್ತರ ನಿನ್ನ ಮೌನವಾ...?

ನಿನ್ನ ಸ್ಪರ್ಷಕ್ಕಾಗಿ ಹಂಬಲಿಸುತ್ತಿರುವ
ಈ ಮನಸನ್ನು ಹೇಗೆ ಸಂತೈಸಲಿ
ಕುರುಡು ಪ್ರೀತಿಗೆ ಕಣ್ಣು ಕೊಟ್ಟೆ
ಅನುಭವಿಸುವಷ್ಟರಲ್ಲಿ ದೃಷ್ಟಿಯನ್ನೇಕೆ ಕಸಿದುಕೊಂಡೆ..?
ಇನ್ನು ನಿನಗಾಗಿ ನಿರೀಕ್ಷಿಸಲೆ ಗೆಳೆಯಾ..?

ಬುಧವಾರ, ಏಪ್ರಿಲ್ 11, 2012

ನನಗೆ ಅರ್ಥವಾಯಿತು ನಿನ್ನ ಮೌನ ಪ್ರೀತಿ

ಗೆಳೆಯ ಕೈ ಹಿಡಿದು
ನಿನ್ನ ಜೋತೆ ನಡೆವಾಗ
ಅರ್ಥವಾಗಲಿಲ್ಲ ಆ ನಿನ್ನ ಪ್ರೀತಿ
ನಿನ್ನೊ೦ದಿಗೆ ಹ೦ಚಿ ತಿನ್ನುವಾಗ
ತಿಳಿಯಲಿಲ್ಲ ಆ ನಿನ್ನ ಪ್ರೀತಿ
ನಿನಗಾಗಿ ಕಾದ ಕ್ಷಣ
ಕೊಡ ಯುಗಗಳ೦ತೆ ಕಳೆದಾಗ
ನೆನಪಾಗಲಿಲ್ಲ ಆ ನಿನ್ನ ಪ್ರೀತಿ
ನೀ ಕೊಟ್ಟ
ಕಾಲ೦ದುಗೆಯ ಸದ್ದಿನಲ್ಲಿ
ಕೇಳಿ ಬರಲಿಲ್ಲ ಆ ನಿನ್ನ ಪ್ರೀತಿ
ಇ೦ದು ಬಳೆಗಳನ್ನು
ತೊಡುವ ಬಯಕೆ
ತ೦ದಿದೆ ಆ ನಿನ್ನ ಪ್ರೀತಿ
ಮುಡಿಗೆ ಇತ್ತ ಹೊವಿನ ಸುಗ೦ಧ
ನಿನ್ನ ನೆನಪಿನಲ್ಲಿ
ನೆಪವಾಗಿತ್ತು ಆ ನಿನ್ನ ಪ್ರೀತಿ
ಹೇಳಬಯಸಲೆ ಇಲ್ಲ ನೀ ಯಾಕೇ......?!

ಸೋಮವಾರ, ಮಾರ್ಚ್ 12, 2012

ಬೆರಳೆಣಿಕೆಯಷ್ಟು ಸಮಯ ಸಿಕ್ಕರೆ ಇನಿಯ..!!

ಬೆರಳೆಣಿಕೆಯಷ್ಟು
ಸಮಯ ಸಿಕ್ಕರೆ ಇನಿಯ
ನಾ ನಿನ್ನ ಜೀವನದ ಕಥಾ ನಾಯಕಿಯಗುವೆ.
ಬರೆದಿಟ್ಟ ಪುಟಗಳೆಷ್ಟೋ
 ನಿನ್ನ ನೆನಪು
ಗೆಳೆಯ ನಿನಗೆ ಕಳುಹಿಸಲು ರಾಯಭಾರಿ ಇಲ್ಲ.
ರಥ ಉ೦ಟು,
ಅಶ್ವವು ಉ೦ಟು
ನಡೆಸುವ ಸಾರಥಿಯೇ ಇಲ್ಲ.
ಜೀವನದ ಯುದ್ದ ಭೂಮಿಗೆ
ನಿನ್ನ ಅವಶ್ಯಕಥೆ ಇದೆ.
ಸಾಕೆನಿಸುತ್ತದೆ ಈ ನಿರೀಕ್ಷಣೆ.....

ಭಾನುವಾರ, ಮಾರ್ಚ್ 4, 2012

ನಿನ್ನ ಪ್ರೀತಿಯಿ೦ದಲೇ ಕಟ್ಟಿರುವ ತಾಜಮಹಲ್..!!

ನಾನು
ನನ್ನ ಪ್ರೀತಿಯ ತಾಜ್ ಮಹಲ್ ನ್ನು
ನಿನ್ನ ಪ್ರೀತಿಯಿ೦ದ ಕಟ್ಟಿರುವೆ.
ಅದು ನಿನ್ನ ನಗುವಿನ ನಿಧಿ.
ನಿನಗಾಗಿ ನಾನಿದ್ದಿನಿ
ಆದರೆ ನಿನ್ನ ಪ್ರೀತಿಗಾಗಿ ಆ ಮಹಲ್.
ನನ್ನ ನೆನಪಿನೊ೦ದಿಗೆ
ಕಣ್ಣು ಮುಚ್ಚಿ ತೆರೆ,
ನಿನ್ನ ಕ೦ಬನಿಯ ಚು೦ಬಿಸಲು
 ನಾ ಬರುವೆ!
ಮುಗಿಲ ಬಣ್ಣವನ್ನು ಹೊತ್ತು
ನಿನ್ನ ಪ್ರೀತಿಯ ಎ೦ಜೆಲ್ ಆಗಿ.
ಚಿ೦ತಿಸದಿರು
ನಾ ನಿನ್ನ ಕಾಣದ ಉಸಿರು.

ಮಂಗಳವಾರ, ಫೆಬ್ರವರಿ 14, 2012

ಪ್ರೀತಿಯೇ ಉಡುಗೊರೆ

ಗೆಳೆಯ ಸ್ನೇಹಕ್ಕಾಗಿ
 ಕೈ ಚಾಚಿ  ನೀ ಬ೦ದೆ,
ನಾ ನನ್ನ ಪ್ರೀತಿಯನ್ನೆ
ನಿನಗೆ ಉಡುಗೊರೆಯಾಗಿ
 ನೀಡಲು ಬಯಸಿದೆ.
ಪ್ರೀತಿಯನ್ನೆ ಪ್ರೀತಿಯಿ೦ದ ಪ್ರೀತಿಗೊಸ್ಕರ
ಕಿರು ನಗೆಯೊ೦ದಿಗೆ ನೀಡಿರುವೆ.
ಒಮ್ಮೆ
ಇಣುಕಿ ನೋಡು ಮನದೊಳಗೆ
ಕೆ೦ಪು ಗುಲಬಿಯ ಹಿಡಿದು ಕಾದಿರುವೆ....!
ನಿನಗೆ ಶುಭ ಕೋರಲು........!!!!!!!!!
HAPPY VALENTINES DAY WITH MY LOTS OF LOVE.!

ಮಂಗಳವಾರ, ಜನವರಿ 31, 2012

ಕಾರಣವೇ ಅಲ್ಲದ ಕಾರಣಕ್ಕೆ ಹುಟ್ಟಿಕೊಂಡ ಪ್ರೀತಿಯದು..!!

ನನ್ನ
ಅಪೂರ್ಣ ಕವನಕ್ಕೆ
ಸ್ಪೂರ್ತಿ ನಿನಾದೆ..!!;
ಪ್ರಶ್ನೆಗಳನ್ನ
ಹೊತ್ತ ಸಾಲುಗಳಿಗೆ
ನಿನ್ನ ಉತ್ತರವೆ ಇಲ್ಲ..!!;
ಕಾರಣ
ನಿನ್ನ ಪೂರ್ಣ ಪ್ರೀತಿಯನ್ನ
ನನಗೆ ನೀಡಲು
ನಿರಾಕರಿಸಿದ್ದು..!!;
ಆ..ಶಿಲೆಗಳಲ್ಲಿರುವ
ಏಳು ಸ್ವರದ ಭಾವನೆ
ನಿನ್ನ ಜೀವಂತ ಹೃದಯಕ್ಕೆ
ಇಲ್ಲವಾಗುವದೇ..!!?
ಇನಿಯಾ
ನೀ ಕಲ್ಲಾದರೂ ಆಗು
ಒಮ್ಮೆ ಪ್ರೀತಿಸು ನನ್ನ...!!ಶನಿವಾರ, ಅಕ್ಟೋಬರ್ 29, 2011

ನಿನ್ನ ಹೊರತು ಬೇರೆನು ಬೇಡ ಪ್ರೀಯ..!!

ನಿನ್ನೆ ಸಿಕ್ಕ
ನಿನ್ನ  ನೆನಪುಗಳು
ಕೇವಲ ನೆಪವಾಗದೆ
ಬೇನ್ನ ಹಿಂದಿನ
ಹಿಂಬರಹವಾಗಿ ಮೂಡಿವೆ..!!
ಅದನ್ನು ನೋಡಲೂ ಆಗುತ್ತಿಲ್ಲ
ಓದಲು ಆಗುತ್ತಿಲ್ಲ..!!
ಆ..!! ಸಾಲುಗಳು
ನಿನ್ನ ಹೊರತು
ಬೇರೆ ಯಾರಿಗೂ ಗೋಚರಿಸುವದಿಲ್ಲ..!!
ಮನಸು ಒಪ್ಪದ ಪ್ರೀತಿ..!?
ಎಂದರೆ ಇದೇನಾ..!!??