ಶುಕ್ರವಾರ, ಜುಲೈ 8, 2011

ಕಣ್ಣು ಮುಚ್ಚಿದರೆ ಸಾಕು...!

ನಾ
ಮರೆವೆನೆಂದರೆ ನಿನ್ನ
ಕ್ಷಣ ಕ್ಷಣಕ್ಕೂ ಕಾಡುತ್ತಿ
ಕಣೋ ನೀ ನನ್ನ ,
ಅರೇ ಕ್ಷಣ
ಜಗವ ಮರೆತು
ಕಣ್ಣು ಮುಚ್ಚಿದರೆ ಸಾಕು,
ನನ್ನ
ನಿನ್ನ ಮಡಿಲಲ್ಲಿ ಮಲಗಿಸಿಕೊಂಡು
ಚುಂಬಿಸಿದಂತೆ ಭಾಸವಾಗುತ್ತೆ,
ನಿನ್ನನ್ನ
ಕಣ್ಣ ತುಂಬ
ತುಂಬಿಕೊಂಡ ನನಗೆ
ಅವಕಾಶ ನೀಡಲಾಗುತ್ತಿಲ್ಲ
ಆ ಕಂಬನಿಗಳಿಗೆ,
ಎನು ಮಾಡಲಿ
ಆ ನಿನ್ನ ನೆನಪುಗಳನ್ನ ಚಿನ್ನ
ಅವು ನಿನಗಿಂತ ಚೆನ್ನ..!!

ಸೋಮವಾರ, ಜುಲೈ 4, 2011

ನನ್ನ ನೆನಪು ಕಾಡದಿರುವಷ್ಟು...!!

ಇನಿಯ
ನನ್ನ ನೆನಪು
ಬಾರದೆ ನಿನಗೆ,..!?
ನನ್ನ ನೆನಪು  ಕಾಡದಿರುವಷ್ಟು 
ನಾ ಭಾರವೇ ನಿನಗೆ...!?
ಬಿಟ್ಟು ಹೋಗದಿರು
ಸ್ನೇಹದ ಗೂಡ ಮರೆಯದಿರು
ನನ್ನ ಅನಿರೀಕ್ಷಿತ ಪ್ರೀತಿಯ
ತೊರೆದು ಹೋಗದಿರು
ನನ್ನ ಮರಣಕ್ಕೆ ಮುನ್ನ
ಮರಣದ ನಂತರವೂ.
ನಿನಗಾಗಿ ನಾ ಕಾಯಲೇ..!?