ಮಂಗಳವಾರ, ಆಗಸ್ಟ್ 23, 2011

ಇನಿಯಾ ಕಷ್ಟವಾಗಿದೆ ಇಚ್ಛೆ ಇಲ್ಲದ ಮಂದಹಾಸ

ನಿನಗಾಗಿ ಕಣ್ಣಿನ
ಒಂದೆರದು ಹನಿಗಳಿಗೆ
ಅವಕಾಶ ನೀಡಲೇ..!!?
ಅಥವಾ
ಕಣ್ಮುಚ್ಚಿ
ನಿನ್ನ ನೆನಪಲ್ಲಿ
ನಿಟ್ಟುಸಿರು ಬೀಡಲೇ..!!?
ಇನಿಯಾ ಕಷ್ಟವಾಗಿದೆ
ಇಚ್ಛೆ ಇಲ್ಲದ ಮಂದಹಾಸ
ಮುಖದಲ್ಲಿ ಮಿಸುಕಾಡುತ್ತಿದೆ
ಇವು
ನಾಳೆ ನೀ ಬರುವ
ಇಂದಿನ ಬರವಸೇಗಳೇ..!!?
ಹಾಗದರೆ ನಾಳೆಯದ್ದು..?
ನನ್ನ ಉಸಿರಿರುವದಾದರೆ
ನಾಳೆಯ ನಂಬಿಕೆಯಲ್ಲಿ..!!
ಮೇಣದ ಬತ್ತಿ ಹಚ್ಚಿ
ಕಾಯುವೇ..!!!





ಕಾಮೆಂಟ್‌ಗಳಿಲ್ಲ: