ಸೋಮವಾರ, ಮಾರ್ಚ್ 12, 2012

ಬೆರಳೆಣಿಕೆಯಷ್ಟು ಸಮಯ ಸಿಕ್ಕರೆ ಇನಿಯ..!!

ಬೆರಳೆಣಿಕೆಯಷ್ಟು
ಸಮಯ ಸಿಕ್ಕರೆ ಇನಿಯ
ನಾ ನಿನ್ನ ಜೀವನದ ಕಥಾ ನಾಯಕಿಯಗುವೆ.
ಬರೆದಿಟ್ಟ ಪುಟಗಳೆಷ್ಟೋ
 ನಿನ್ನ ನೆನಪು
ಗೆಳೆಯ ನಿನಗೆ ಕಳುಹಿಸಲು ರಾಯಭಾರಿ ಇಲ್ಲ.
ರಥ ಉ೦ಟು,
ಅಶ್ವವು ಉ೦ಟು
ನಡೆಸುವ ಸಾರಥಿಯೇ ಇಲ್ಲ.
ಜೀವನದ ಯುದ್ದ ಭೂಮಿಗೆ
ನಿನ್ನ ಅವಶ್ಯಕಥೆ ಇದೆ.
ಸಾಕೆನಿಸುತ್ತದೆ ಈ ನಿರೀಕ್ಷಣೆ.....

ಭಾನುವಾರ, ಮಾರ್ಚ್ 4, 2012

ನಿನ್ನ ಪ್ರೀತಿಯಿ೦ದಲೇ ಕಟ್ಟಿರುವ ತಾಜಮಹಲ್..!!

ನಾನು
ನನ್ನ ಪ್ರೀತಿಯ ತಾಜ್ ಮಹಲ್ ನ್ನು
ನಿನ್ನ ಪ್ರೀತಿಯಿ೦ದ ಕಟ್ಟಿರುವೆ.
ಅದು ನಿನ್ನ ನಗುವಿನ ನಿಧಿ.
ನಿನಗಾಗಿ ನಾನಿದ್ದಿನಿ
ಆದರೆ ನಿನ್ನ ಪ್ರೀತಿಗಾಗಿ ಆ ಮಹಲ್.
ನನ್ನ ನೆನಪಿನೊ೦ದಿಗೆ
ಕಣ್ಣು ಮುಚ್ಚಿ ತೆರೆ,
ನಿನ್ನ ಕ೦ಬನಿಯ ಚು೦ಬಿಸಲು
 ನಾ ಬರುವೆ!
ಮುಗಿಲ ಬಣ್ಣವನ್ನು ಹೊತ್ತು
ನಿನ್ನ ಪ್ರೀತಿಯ ಎ೦ಜೆಲ್ ಆಗಿ.
ಚಿ೦ತಿಸದಿರು
ನಾ ನಿನ್ನ ಕಾಣದ ಉಸಿರು.

ಮಂಗಳವಾರ, ಫೆಬ್ರವರಿ 14, 2012

ಪ್ರೀತಿಯೇ ಉಡುಗೊರೆ

ಗೆಳೆಯ ಸ್ನೇಹಕ್ಕಾಗಿ
 ಕೈ ಚಾಚಿ  ನೀ ಬ೦ದೆ,
ನಾ ನನ್ನ ಪ್ರೀತಿಯನ್ನೆ
ನಿನಗೆ ಉಡುಗೊರೆಯಾಗಿ
 ನೀಡಲು ಬಯಸಿದೆ.
ಪ್ರೀತಿಯನ್ನೆ ಪ್ರೀತಿಯಿ೦ದ ಪ್ರೀತಿಗೊಸ್ಕರ
ಕಿರು ನಗೆಯೊ೦ದಿಗೆ ನೀಡಿರುವೆ.
ಒಮ್ಮೆ
ಇಣುಕಿ ನೋಡು ಮನದೊಳಗೆ
ಕೆ೦ಪು ಗುಲಬಿಯ ಹಿಡಿದು ಕಾದಿರುವೆ....!
ನಿನಗೆ ಶುಭ ಕೋರಲು........!!!!!!!!!
HAPPY VALENTINES DAY WITH MY LOTS OF LOVE.!

ಮಂಗಳವಾರ, ಜನವರಿ 31, 2012

ಕಾರಣವೇ ಅಲ್ಲದ ಕಾರಣಕ್ಕೆ ಹುಟ್ಟಿಕೊಂಡ ಪ್ರೀತಿಯದು..!!

ನನ್ನ
ಅಪೂರ್ಣ ಕವನಕ್ಕೆ
ಸ್ಪೂರ್ತಿ ನಿನಾದೆ..!!;
ಪ್ರಶ್ನೆಗಳನ್ನ
ಹೊತ್ತ ಸಾಲುಗಳಿಗೆ
ನಿನ್ನ ಉತ್ತರವೆ ಇಲ್ಲ..!!;
ಕಾರಣ
ನಿನ್ನ ಪೂರ್ಣ ಪ್ರೀತಿಯನ್ನ
ನನಗೆ ನೀಡಲು
ನಿರಾಕರಿಸಿದ್ದು..!!;
ಆ..ಶಿಲೆಗಳಲ್ಲಿರುವ
ಏಳು ಸ್ವರದ ಭಾವನೆ
ನಿನ್ನ ಜೀವಂತ ಹೃದಯಕ್ಕೆ
ಇಲ್ಲವಾಗುವದೇ..!!?
ಇನಿಯಾ
ನೀ ಕಲ್ಲಾದರೂ ಆಗು
ಒಮ್ಮೆ ಪ್ರೀತಿಸು ನನ್ನ...!!



ಶನಿವಾರ, ಅಕ್ಟೋಬರ್ 29, 2011

ನಿನ್ನ ಹೊರತು ಬೇರೆನು ಬೇಡ ಪ್ರೀಯ..!!

ನಿನ್ನೆ ಸಿಕ್ಕ
ನಿನ್ನ  ನೆನಪುಗಳು
ಕೇವಲ ನೆಪವಾಗದೆ
ಬೇನ್ನ ಹಿಂದಿನ
ಹಿಂಬರಹವಾಗಿ ಮೂಡಿವೆ..!!
ಅದನ್ನು ನೋಡಲೂ ಆಗುತ್ತಿಲ್ಲ
ಓದಲು ಆಗುತ್ತಿಲ್ಲ..!!
ಆ..!! ಸಾಲುಗಳು
ನಿನ್ನ ಹೊರತು
ಬೇರೆ ಯಾರಿಗೂ ಗೋಚರಿಸುವದಿಲ್ಲ..!!
ಮನಸು ಒಪ್ಪದ ಪ್ರೀತಿ..!?
ಎಂದರೆ ಇದೇನಾ..!!??

ಮಂಗಳವಾರ, ಅಕ್ಟೋಬರ್ 25, 2011

ಗೂಡು



ಹೃದಯಕ್ಕೆ ಹತ್ತಿರವಾದೆ
ಅದಕ್ಕೆ ನಾ ನಿನ್ನ
ಜೀವದ ಗೇಳೆಯ ಎಂದೆ..!!
ನೀ ಕೇಳದಿದ್ದರೂ
ನನ್ನ ಮನಸಲ್ಲಿ
ಗೂಡು ಮಾಡಿಕೊಟ್ಟೆ..!!
ಇಂದು
ಉಸಿರು ಕಟ್ಟಿದೆ
ಆದರೂ ನಿನ್ನ ಸುಳಿವಿಲ್ಲ..!!
ಮನಸ್ಸೆಂಬ ಮರಕ್ಕೆ
ಗೂಡೆಂಬ ಖಾಲಿ ಜೋಕಾಲಿ
ಇಣುಕಿ ನೋಡಿದರೆ
ಬರಿ ನೆನಪಿನ ಧೂಳು..!!

ಮಂಗಳವಾರ, ಆಗಸ್ಟ್ 23, 2011

ಇನಿಯಾ ಕಷ್ಟವಾಗಿದೆ ಇಚ್ಛೆ ಇಲ್ಲದ ಮಂದಹಾಸ

ನಿನಗಾಗಿ ಕಣ್ಣಿನ
ಒಂದೆರದು ಹನಿಗಳಿಗೆ
ಅವಕಾಶ ನೀಡಲೇ..!!?
ಅಥವಾ
ಕಣ್ಮುಚ್ಚಿ
ನಿನ್ನ ನೆನಪಲ್ಲಿ
ನಿಟ್ಟುಸಿರು ಬೀಡಲೇ..!!?
ಇನಿಯಾ ಕಷ್ಟವಾಗಿದೆ
ಇಚ್ಛೆ ಇಲ್ಲದ ಮಂದಹಾಸ
ಮುಖದಲ್ಲಿ ಮಿಸುಕಾಡುತ್ತಿದೆ
ಇವು
ನಾಳೆ ನೀ ಬರುವ
ಇಂದಿನ ಬರವಸೇಗಳೇ..!!?
ಹಾಗದರೆ ನಾಳೆಯದ್ದು..?
ನನ್ನ ಉಸಿರಿರುವದಾದರೆ
ನಾಳೆಯ ನಂಬಿಕೆಯಲ್ಲಿ..!!
ಮೇಣದ ಬತ್ತಿ ಹಚ್ಚಿ
ಕಾಯುವೇ..!!!